ಟಿ.ಡಿ.ಆರ್ ಬಗ್ಗೆ

 

ಮುಖಪುಟ      ಟಿ.ಡಿ.ಆರ್ ಬಗ್ಗೆ

 

Transfer development rights  


ಟಿ.ಡಿ.ಆರ್ ಬಗ್ಗೆ


ಸ್ವತ್ತಿನ ಮಾಲೀಕರು ತಾವು ಪರಿತ್ಯಜಿಸಿದ ಸ್ವತ್ತಿನ ಬದಲಾಗಿ ಅಭಿವೃದ್ಧಿಪಡಿಸಿದ ಹೆಚ್ಚುವರಿ ನೆಲದ ವಿಸ್ತೀರ್ಣವನ್ನು ಅನುಭವಿಸಬಹುದಾಗಿದ್ದು, ಸದರಿ ಅಭಿವೃದ್ಧಿ ಪಡಿಸಿದ ಹೆಚ್ಚುವರಿ ಭೂ ವಿಸ್ತೀರ್ಣವನ್ನು ಸ್ವಯಂ ತಾವೇ ಉಪಯೋಗಿಸಬಹುದು ಅಥವಾ ಬೇರೊಬ್ಬರಿಗೆ
ವರ್ಗಾಯಿಸಿ ಹಣಕಾಸಿನ ಪ್ರತಿಫಲ ಮೊತ್ತವನ್ನು ಪಡೆಯಬಹುದಾಗಿರುತ್ತದೆ. ಸದರಿ ಅಭಿವೃದ್ಧಿ ಪಡಿಸುವ ಭೂ ವಿಸ್ತೀರ್ಣವನ್ನು ಅಭಿವೃದ್ಧಿ ಹಕ್ಕು ಎಂದು ಕರೆಯುತ್ತಾರೆ.

 


ವರ್ಗಯಿಸಬಹುದಾದ  ಅಭಿವೃದ್ಧಿ ಹಕ್ಕುಗಳನ್ನು 2005ರಲ್ಲಿ ಬೆಂಗಳೂರಿನಲ್ಲಿ ಜಾರಿಗೆ ತಂದಿದ್ದು, ಒಂದು ವೇಳೆ ಸರ್ಕಾರದ ಅಭಿವೃದ್ಧಿ ಯೋಜನೆಗಾಗಿ ಖಾಸಗಿ ಸ್ವತ್ತಿನ ಮಾಲೀಕರು ತಮ್ಮ ಸ್ವತ್ತನ್ನು ಕಳೆದುಕೊಂಡರೆ ಈ ಸಂದರ್ಭದಲ್ಲಿ ವರ್ಗಾಯಿಸಬಹುದಾಗಿದೆ. ಅಭಿವೃದ್ಧಿ ಹಕ್ಕುಗಳನ್ನು ಸಂಬಂಧಪಟ್ಟ ಯೋಜನಾ ಅಧಿಕಾರಿಯು ಅಂತಹ ಖಾಸಗಿ ಸ್ವತ್ತಿನ ಮಾಲೀಕರಿಗೆ ನೀಡುತ್ತಾರೆ. ವರ್ಗಯಿಸಬಹುದಾದ ಅಭಿವೃದ್ಧಿ ಹಕ್ಕುಗಳಲ್ಲಿ ಸ್ವತ್ತನ್ನು ಕಳೆದುಕೊಂಡ ಮಾಲೀಕರು ಒಂದೂವರೆ ಪಟ್ಟು ಹೆಚ್ಚು ಅಭಿವೃದ್ಧಿಪಡಿಸಿದ ಹಕ್ಕು ಪ್ರಮಾಣ ಪತ್ರದ ಭೂ ವಿಸ್ತೀರ್ಣವನ್ನು ಪಡೆಯುತ್ತಾರೆ.



ಕರ್ನಾಟಕದ ಪಟ್ಟಣ ಮತ್ತು ಗ್ರಾಮ ಯೋಜನಾ ಕಾಯ್ದೆ 1961ರ ಪರಿಚ್ಚೇದ 14ಬಿ ಅಡಿಯಲ್ಲಿ ಎಲ್ಲಾ ಅಭಿವೃದ್ಧಿ ಯೋಜನೆಗಳು ಜಾರಿಗೆ ಬರುತ್ತಿತ್ತು. ಈ ಕಾಯ್ದೆಯನ್ನು ಕಾಲಕಾಲಕ್ಕೆ ಅನುಗುಣವಾಗಿ ಮತ್ತು ಅವಶ್ಯಕತೆಗೆ ಅನುಗುಣವಾಗಿ ರಾಜ್ಯಸರ್ಕಾರವು ತಿದ್ದುಪಡಿಗಳನ್ನು ತರುತ್ತದೆ. ಅದರಂತೆ 2005ನೆಯ ಇಸವಿಯಲ್ಲಿ ಕ.ಪ.ಗ್ರಾಮ ಯೋಜನೆ 1961ರ ಪರಿಚ್ಚೇದ 14ಬಿಗೆ ರಾಜ್ಯಸರ್ಕಾರವು ತಿದ್ದುಪಡಿ ತಂದಿದ್ದು ಅದರಂತೆ ನಗರದ ಯಾವುದೇ ಹಾಲಿ ಇರುವ ರಸ್ತೆಗಳನ್ನು ಅಗಲೀಕರಣಗೊಳಿಸಲು, ಹೊಸ ರಸ್ತೆ, ಉದ್ಯಾನವನ, ಆಟದ ಮೈದಾನಗಳ ನಿರ್ಮಾಣಕ್ಕೆ ಅಥವಾ ಇನ್ಯಾವುದೇ ಸಾರ್ವಜನಿಕರ ಉಪಯೋಗಕ್ಕೆ ಯೋಜನೆಗಳಿಗೆ ಖಾಸಗಿ ಮಾಲೀಕರ ಸ್ವತ್ತನ್ನು ಗುರುತಿಸಿ, ಆ ಸ್ವತ್ತಿಗೆ ಮಾಲೀಕರಿಂದ ಪಡೆದು ಪರಿಚ್ಚೇದ ಸ್ವತ್ತಿನ ಬದಲಾಗಿ ಅಭಿವೃದ್ಧಿ ಪಡಿಸಿದ ಹೆಚ್ಚುವರಿ ನೆಲದ ವಿಸ್ತೀರ್ಣವನ್ನು ಅಭಿವೃದ್ಧಿ ಹಕ್ಕಿನ ಪ್ರಮಾಣ ಪತ್ರದ ಮೊಲಕ. ಸದರಿ ಸ್ವತ್ತಿನ ಮಾಲೀಕರು ಅಭಿವೃದ್ಧಿ ಹಕ್ಕುಗಳನ್ನು ಪರಿತ್ಯಜಿಸಿ ಉಳಿದ ಸ್ವತ್ತಿನ ಜೊತೆಗೆ ಅನುಭವಿಸಬಹುದು ಅಥವಾ ಆ ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರವನ್ನು ಬೇರೆಯವರಿಗೆ ವರ್ಗಯಿಸಬಹುದಾದ ರೀತಿಯಾಗಿರುತ್ತದೆ.
 

  

ಟಿ.ಡಿ.ಆರ್ ಲಾಭಗಳು

   

ವರ್ಗಯಿಸಬಹುದಾದ  ಅಭಿವೃದ್ಧಿ ಹಕ್ಕುಗಳನ್ನು ಜಾರಿಗೆ ತಂದರೆ ಸರ್ಕಾರದ ಒತ್ತುವರಿ ಕಾರ್ಯವು ಸುಲಲಿತವಾಗಿ ಜಾರಿಗೊಳ್ಳಲಿದೆ. ಸ್ವತ್ತಿನ ಮಾಲೀಕರಿಗೆ ಉತ್ತಮ (ಪರಿಹಾರಧನ) ದೊರೆಯುತ್ತದೆ.

   

ವರ್ಗಯಿಸಬಹುದಾದ  ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರಗಳ ಯೋಜನೆಯಿಂದ ನಗರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯು ಶರವೇಗದಲ್ಲಿ ನಡೆಯುತ್ತದೆ.

   

ಖಾಸಗಿ ಸ್ವತ್ತು ಕಳೆದುಕೊಂಡ ಮಾಲೀಕರು ಉತ್ತಮ ರೀತಿಯಲ್ಲಿ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ.

   

ವರ್ಗಯಿಸಬಹುದಾದ  ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರಗಳ ಮೂಲಕ ಗೃಹನಿರ್ಮಾಣ ಮತ್ತು ಬಹುಮಹಡಿ ಕಟ್ಟಡಗಳ ಯೋಜನೆಗಳಿಗೆ ಹೆಚ್ಚು  ಅವಕಾಶ ಉಂಟಾಗುತ್ತದೆ.

   

ವರ್ಗಯಿಸಬಹುದಾದ  ಅಭಿವೃದ್ಧಿ ಹಕ್ಕುಗಳ ಜಾರಿಯಿಂದ ಸಾರ್ವಾಜನಿಕರ ಹಣವು ಸರ್ಕಾರದ ಯೋಜನೆಗಳಿಗೆ ಸ್ವಯಂ ಯೋಗವಾಗುತ್ತದೆ.

   

ವರ್ಗಯಿಸಬಹುದಾದ  ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರಗಳ ಯೋಜನೆಯು ತೀವ್ರಗತಿಯಲ್ಲಿ ಸ್ವತ್ತುಗಳನ್ನು ಕಳೆದುಕೊಂಡ ಮಾಲೀಕರಿಗೆ (ಪರಿಹಾರಧನ) ಸಿಗುವಂತೆ ಮಾಡುತ್ತೇವೆ.

 

ನಿದರ್ಶನ ಸಂಖೆ 1 : ನಿಮ್ಮ ಜಾಗದಲ್ಲಿ 500 ಜದರ ಅಂಗಳ ಮೀಟರ್ ರಸ್ತೆಗೆ 'ಎ' ಮಹಡಿ ಅಂಗಳ ಪ್ರಮಾಣವೂ 1:5

I.

ಒಪ್ಪಿಸಿದ ಅಂಗಳ   

1000 ಚದರ ಮೀಟರ್

II.

ಅಧಿಕ ಮಹಡಿ ಅಂಗಳ ಮಾದರಿ ಅಭಿವೃದ್ದಿ ಹಕ್ಕು (1.5)

1500 ಚದರ ಮೀಟರ್

III.

ಅಧಿಕ ಕಟ್ಟಡ ಕಟ್ಟಬವೂದಾದ ಮಹಡಿ ಅಂಗಳ

 

'ಎ' ವಲಯ

1500 ಚದರ ಮೀಟರ್

 

'ಬಿ' ವಲಯ

2250 ಚದರ ಮೀಟರ್

 

'ಸಿ' ವಲಯ

3000 ಚದರ ಮೀಟರ್